Friday, November 30, 2007

ಈ ದಿನ ಖುಶಿಯಾಗಿದೆ..

ಈ ಚಿತ್ರಕ್ಕೆ ಹೋಗೊದೊ ಬೇಡವೊ ಅಂತಿದ್ದೆ.. ಹೊಸ ನಟರು, ನಿರ್ದೇಶಕರು.. ಹೇಗಿರುತಪ್ಪಾ ಅಂತ ಹೋಗಿದ್ದು.. ಆದ್ರೆ ಅಷ್ಟೇನು ನಿರಾಸೆ ಆಗಲಿಲ್ಲ :) ಚಿತ್ರ ಮಂದಿರದಿಂದ ಹೊರಗೆ ಬರುತ್ತಾ ಈ ಹಾಡನ್ನೆ ಹಾಡುತ್ತ ಬಂದೆ :)

"ಈ ದಿನ ಖುಶಿಯಾಗಿದೆ
ನನಗೀಗ ಏನಾಗಿದೆ?
ಈ ತರ ಹೋಸ ಕಾತುರ ನನಗೇಕೆ ಹೀಗಾಗಿದೆ?

ನನ್ನಲ್ಲಿ ನಾನಿಲ್ಲ
ಹೀಗೆಕೊ ಗೊತ್ತಿಲ್ಲ..
ಹಾರಾಡಿದೆ ಮನಸೆಲ್ಲಾ!
ಏನಂತ ಗೊತ್ತಿಲ್ಲ
ಒಂದೊಂದು ಹೊತ್ತಿಲ್ಲ
ನಂಗೆನೊ ಆಗ್ತೈತಲ್ಲಾ.."

ಪೂರ್ತಿ ಸಾಹಿತ್ಯಕ್ಕೆ ಇಲ್ಲಿ ಕ್ಲಿಕಿಸಿ!

ಚಿತ್ರ: ೭ ಒ’ ಕ್ಲಾಕ್
ಸಾಹಿತ್ಯ: ಕೆ. ರಾಮ್ ನಾರಯಣ್
ಗಾಯನ: ರಾಜೇಶ್ ಕೃಷ್ಣನ್, ನಿತ್ಯ ಸಂತೋಶಿಣಿ

Friday, November 09, 2007

ದೀಪಾವಳಿ ಹಬ್ಬದ ಶುಭಾಶಯಗಳು!

ಎಲ್ಲರಿಗು ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು! :)


"ಹಚ್ಚೇವು ಕನ್ನಡದ ದೀಪ..
ಕರುನಾಡ ದೀಪ, ಸಿರಿನುಡಿಯ ದೀಪ
ಒಲವೆತ್ತಿ ತೋರುವಾ ದೀಪ..
ಹಚ್ಚೇವು ಕನ್ನಡದ ದೀಪ!"

ಕನ್ನಡ ಬಳಿಸಿ.. ಉಳಿಸಿ.. ಬೆಳಸಿ!!

----

ಚಿ. ಉದಯಶಂಕರ್ ಸಾಹಿತ್ಯಕ್ಕೆ ಡಾ|ರಾಜ್ ಕುಮಾರ್ ರವರ ಗಾಯನದ ಈ ಹಾಡು ದೀಪಾವಳಿ ಹಬ್ಬದ ಪ್ರಯುಕ್ತ.. ಹೊಸ ಬೆಳಕು ಆರೊಗ್ಯ, ಐಶ್ವರ್ಯ, ಸಂತಸ, ನೆಮ್ಮದಿ, ಶಾಂತಿಯೊಂದಿಗೆ ಮೂಡುತಲಿರಲಿ!

"ಹೊಸ ಬೆಳಕು.. ಮೂಡುತಿದೆ..
ಬಂಗಾರದ.. ರಥವೇರುತ
ಆಕಾಶದಿ.. ಓಡಾಡುತ
ಅತ್ತಾ-ಇತ್ತಾ ಸುತ್ತಾ-ಮುತ್ತಾ ಚೆಲ್ಲಿದಾ..
ಕಾಂತಿಯಾ.. ರವಿ ಕಾಂತಿಯಾ!"

ಪೂರ್ತಿ ಸಾಹಿತ್ಯಕ್ಕೆ ಇಲ್ಲಿ ಕ್ಲಿಕಿಸಿ

ಚಿತ್ರ: ಹೊಸ ಬೆಳಕು
ಸಾಹಿತ್ಯ: ಚಿ. ಉದಯಶಂಕರ್
ಗಾಯನ: ಡಾ|ರಾಜ್ ಕುಮಾರ್

Saturday, September 29, 2007

ಹೀಗೇಕೆ ನಂಗೆ ನೆನಪಾಗುವೆ!?

ಹೀಗೇಕೆ ನಂಗೆ ನೆನಪಾಗುವೆ.. ಹೀಗೆ ನೆನಪಾಗಿ ನಂಗೆ ಏಕೆ ಕಾಡುವೆ..
ಅಂತ ನಾನು ಈ ಹಾಡಿಗೆ ಹೇಳಬೇಕಿದೆ..
ಮೊದ ಮೊದಲು ಈ ಹಾಡನ್ನು ರೇಡಿಯೊಲಿ ಕೇಳಿದಾಗ "ಓಕೆ" ಅನ್ನಿಸಿತ್ತು.. ಕೇಳ್ತಾ ಕೇಳ್ತಾ ಇಷ್ಟ ಆಗ್ತಿದೆ. ಕುನಾಲ್ ಗಾಂಜವಾಲ ಗಾಯನ ಕೂಡ ಒಂಥರ ರೋಮಾಂಚನಗೊಳಿಸುತ್ತದೆ. ಜಾಸ್ತಿ ಮಾತೇಕೆ, ನೀವೆ ಕೇಳಿ ಹೇಳಿ :)

"ಹೀಗೇಕೆ ನಂಗೆ ನೆನಪಾಗುವೆ?!
ಈಗ ಎಲ್ಲೆಲ್ಲು ನಂಗೆ ನೀ ಕಾಡುವೆ..
ಸುಡು ಸುಡುತಿದೆ ಎದೆಯೋಳಗೆ ನಿನದೆ ನೆನಪು..
ಕಾಡಿಸುತಿದೆ ಪ್ರಾತಿ ಘಳಿಗೆ ನಿನದೆ ನೆನಪು.. ನನ್ನಾಣೆ!"

ಪೂರ್ತಿ ಸಾಹಿತ್ಯಕ್ಕೆ ಇಲ್ಲಿ ಕ್ಲಿಕಿಸಿ!

ಚಿತ್ರ: ನಿನದೆ ನೆನಪು
ಸಾಹಿತ್ಯ: ಕವಿರಾಜ್
ಗಾಯನ: ಕುನಾಲ್ ಗಾಂಜವಾಲ

Monday, September 24, 2007

ನಮಸ್ಕಾರ ನಮಸ್ಕಾರ ನಮಸ್ಕಾರ..

ನಮಸ್ಕಾರ ನಮಸ್ಕಾರ ನಮಸ್ಕಾರ.. ಇದು ಸ್ವರದ ಸಮಯ :)

ಎಲ್ಲರಿಗೂ ಸ್ವರಗಳ ಲೋಕಕ್ಕೆ ಮತ್ತೊಮ್ಮೆ ಸ್ವಾಗತ. ಇಷ್ಟ್ ದಿನ ಎಲ್ಲಿ ನಾಪತ್ತೆ ಆಗಿತ್ತು ಅಂತ ಯೋಚಿಸ್ತಿರ್ಬೆಕು ಅಲ್ಲ.. ಹೋಗ್ಲಿ ಬಿಡಿ ಇವಗ ವಾಪಸ್ ಬಂದಿದಿನಲ್ಲ :)

ಶುರು ಹಚ್ಕೊಳನ್ವೆ..

ಈಗೀಗ್ಲೆ ಎಲ್ಲರ ಮನ ಸೂರೆಗೊಂಡಿರೊ ಸುಮಧುರ ಗೀತೆ..

"ನಿನ್ನಿಂದಲೆ.. ನಿನ್ನಿಂದಲೆ ಕನಸೊಂದು ಶುರುವಾಗಿದೆ
ಈ ಎದೆಯಲ್ಲಿ ಸಿಹಿಯಾದ ಕೋಲಾಹಲ..
ನನ್ನೆದುರಲ್ಲಿ ನೀ ಹೀಗೆ ಬಂದಾಗಲೆ
ನಿನ್ನ ತುಟಿಯಲ್ಲಿ ನಗುವಾಗುವ ಹಂಬಲ
ನಾ ನಿಂತಲ್ಲೆ ಹಾಡಾದೆ ನಿನ್ನಿಂದಲೆ!"

ಪೂರ್ತಿ ಸಾಹಿತ್ಯಕ್ಕೆ
ಇಲ್ಲಿ ಕ್ಲಿಕಿಸಿ!

ಅಬ್ಬ! ಏನ್ ಸಕ್ಕತ್ ಸಾಹಿತ್ಯ ಅಲ್ವ? ಜಯಂತ್ ಕಾಯ್ಕಿಣಿ ಅವರಿಗೆ ಹ್ಯಾಟ್ಸ್-ಆಪ್. ಸೋನು ನಿಗಮ್ ಅವರು ಈ ಹಾಡಿಗೆ ತಮ್ಮ ಕಂಟ ನೀಡಿದ್ದಾರೆ, ತುಂಬ ಚೆನ್ನಾಗಿ ಮೂಡಿ ಬಂದಿದೆ..

ಈ ಹಾಡನ್ನು ಇನ್ನು ಕೇಳಿಲ್ಲ ಅಂದ್ರ?
ಕೆಳಗಿರೊ ಲಿಂಕನ್ನು ಕ್ಲಿಕಿಸಿ, ಕೇಳಿ ನಿಮ್ಮ ಅಭಿಪ್ರಾಯ ತಿಳಿಸಿ, ಮಜಾ ಮಾಡಿ :)

ಚಿತ್ರ: ಮಿಲನ
ಸಂಗೀತ: ಮನೊ ಮೂರ್ತಿ
ಗಾಯನ: ಸೋನು ನಿಗಮ್

Thursday, November 16, 2006

Blogger Beta

namskaara ellarigu. hEgiddeera?
nimmellarigu eegaagale Blogger Beta bagge tiLidirabahudu. naanu bahaLa dinagaLa naMtara login aaguvaaga ee hosa badalaavaNe kaMDubaMtu. nanna blog page badalaayisabekeMdu kaayutidde.. eega kaalavakaasha kUDibaMtu.

Blogger Beta na naavu gmail id, iddare, iMda login aagabahudu. bahaLa cennaagide ee soulabhya. hiMde template nalli baNNa athava innitara vishayagaLu mArpaaDu maaDuvudakke bahaLa samaya vyayavaagutittu. eega ide kelsa oMdu ili (mouse :naa) click iMda saadhya.

anyways, idara bagge nimma anisikegaLannu tiLisuvaMtavaraagi :)

Monday, October 09, 2006

ಕನ್ನಡ ಸ್ಮಿತೆಗಳು



ಅಬ್ಬ! ಕೊನೆಗು ನಾ ಸ್ಮಿತೆಗಳ ಬಗ್ಗೆ ಬರ್ಯೋದಿಕ್ಕೆ ಟೇಮ್ ಮಾಡ್ಕೊಂಡೇಬಿಟ್ಟೆ ಅನ್ನಿ :ಹ

ಸೊ ಜಾಸ್ತಿ ಏನು ಹೇಳ್ಬೇಕಾಗಿಲ್ಲ ಅಂತ ಅಂಕೊತಿನಿ. ಒಂದೇ ಒಂದು ಕೋರಿಕೆ - ಈ ಸ್ಮಿತೆಗಳನ್ನು ನಿಮ್ಮ ದಿನ ನಿತ್ಯ ಸಂಭಾಷಣೆಗಳಲ್ಲಿ ಆದಷ್ಟು ಬಳಸಿರಿ ಎಂದು.
ಮಜಾ ಮಾಡಿ, ನಿಮ್ಮ ಅನಿಸಿಕೆ ತಿಳಿಸಿ :)


ಅಂತರ್ಜಾಲದಲ್ಲಿ ಸಂವಹನ(communication) ಕನ್ನಡದಲ್ಲೇ ವ್ಯಾಪಕವಾಗಿ ನಡೆಯುತ್ತಿರುವುದು ಅತ್ಯಂತ ಸಂತಸದ ಸಂಗತಿ. ಕನ್ನಡದಲ್ಲೇ ಚರ್ಚಿಸುವುದು, ಕನ್ನಡದಲ್ಲೆ ಹರಟೆ ಹೊಡೆಯುವುದು, ಕನ್ನಡದಲ್ಲೇ ಬ್ಲಾಗಿಸುವುದು, ಕನ್ನಡದಲ್ಲೇ ಪ್ರತಿಕ್ರಿಯಿಸುವುದು ನಡೆಯುತ್ತಿದೆ ಮತ್ತು ಇವೆಲ್ಲವೂ ದಿನೆ ದಿನೆ ಹೆಚ್ಚುತ್ತಿದೆ. ಸ್ಮಿತೆಗಳ (Smileys) ವಿಚಾರದಲ್ಲಿ ಕನ್ನಡದ ಬಳಕೆ ಅಷ್ಟು ಇದ್ದಂತಿಲ್ಲ. ಕನ್ನಡದಲ್ಲಿ ಬರೆಯುವಾಗ, ಸ್ಮಿತೆ ಹಾಕುವ ಉದ್ದೇಶಕ್ಕಾಗಿಯೇ ಇಂಗ್ಲೀಷ್ ಮೊರೆ ಹೋಗಿ, :D X-(, LOL, ROFLOL, BRB, :O, :P ಇತ್ಯಾದಿಯಾಗಿ ಬಳಸುತ್ತಿದ್ದೇವೆ.

ಇವುಗಳನ್ನೂ ಕೂಡ ಕನ್ನಡದಲ್ಲಿಯೇ ಏಕೆ ಬಳಸಬಾರದು ಎಂದು ಕೆಲವರೊಂದಿಗೆ ಚರ್ಚಿಸಿ, ಕನ್ನಡದಲ್ಲಿಯೆ ಟೈಪ್ ಮಾಡಿ ಭಾವನೆಗಳನ್ನು ವ್ಯಕ್ತಪಡಿಸಬಹುದಾಂತ ಸ್ಮಿತೆಗಳನ್ನು ರೂಪಿಸುವ ಕೆಲಸ ಪ್ರಾರಂಭಿಸಿದೆವು. ಸುಮಾರು ೨ ತಿಂಗಳ ಸುದೀರ್ಘ ಚರ್ಚೆಯ ಫಲಿತಾಂಶವನ್ನೇ ಇಂದು ನಿಮ್ಮೆಲ್ಲರ ಮುಂದೆ ಹಂಚಿಕೊಳ್ಳುತ್ತಿದ್ದೇವೆ. ಈ ಸ್ಮಿತೆಗಳ ಜೊತೆಗೆ, ಬೆಂಗಳೂರಿನ ಬಿ.ಆರ್.ಕಿರಣ ಅವರು ರೂಪಿಸಿರುವ ಮಿಂಚೆ ಮತ್ತು ಚಿಕ್ಕೋಲೆ ಪದಗಳನ್ನು ಬಳಸಬೇಕೆಂದು ನಿರ್ಧರಿಸಿದ್ದೇವೆ. ಈಗಾಗಲೆ ಈ ಪದಗಳು ಕನ್ನಡದ ಕೆಲವು ಯಾಹೂ ಗುಂಪು, ಗೂಗಲ್ ಗುಂಪುಗಳಲ್ಲಿ ಪ್ರಚಲಿತವಾಗಿವೆ.

~.~.~.~.~.~.~.~.~.~.~.~.~.~.~.~.~.~.~.~.~.~.~.~.~.~.~.~.~.~.

:O ==> :ಓ (ಓಹ್)
:D ==> :ಹ (ಹಲ್ಕಿರಿ)
:P ==> :ನಾ (ನಾಲಿಗೆ ತೋರಿಸು)
:-h ==> :ಟಾ (ಟಾಟಾ)
:-? ==> :ಯೋ (ಯೋಚನೆ)
X-( ==> :ಗುರ್ರ್ (ಗುರ್ರ್ ಅಂತ ಕೋಪ ತೋರಿಸು)


LOL ==> ಬಿಬಿನ/ಎಬಿನ (ಬಿದ್ದು ಬಿದ್ದು ನಗು/ಎದ್ದು ಬಿದ್ದು ನಗು)
ROFLOL ==> ನೆಮೇಬಿಬಿನ/ನೆಮೇಎಬಿನ (ನೆಲದ ಮೇಲೆ ಬಿದ್ದು ಬಿದ್ದು ನಗು/ನೆಲದ ಮೇಲೆ ಎದ್ದು ಬಿದ್ದು ನಗು)
OMG ==> ಅದೇ (ಅಯ್ಯೋ ದೇವರೆ)
BRB ==> ಈಬ (ಈಗ ಬರ್ತೀನಿ/ಬರುವೆ)
*thumbsup* ==> *ಜೈ*

:ಸಿ = ಸಿಗೋಣ
:ಮಸಿ = ಮತ್ತೆ ಸಿಗೋಣ
:ಕಕಾಂ = ಕರ್ಮಕಾಂಡ
:ಕಕಾಂಪ = ಕರ್ಮಕಾಂಡದ ಪರಮಾವಧಿ
:ಶಿಶಂ / :ಸಿಸಂ = ಶಿವನೆ ಶಂಭುಲಿಂಗ / ಸಿವನೆ ಸಂಭುಲಿಂಗ
:ಯಚಿ / :ಎಚಿ = ಯಕ್ಕಾಚಿಕ್ಕಿ / ಎಕ್ಕಾಚಿಕ್ಕಿ
:ನನಸು/ಸಾ = ನಕ್ಕು ನಕ್ಕು ಸುಸ್ತು/ಸಾಕುಯ್ತು
:ಟೋಕೆ = ಟೋಪಿಗಳು ಕೆಳಗೆ
*ಚಿಂಚಿ* = ಚಿಂದಿ ಚಿತ್ರಾನ್ನ

SMS/sms ==> ಚಿಕ್ಕೋಲೆ (ಚಿಕ್ಕ ಓಲೆ)
email ==> ಮಿಂಚೆ (ಮಿಂಚಿನ ಅಂಚೆ)

ಮಿಂಚೆ ಪದದ ಕ್ರಿಯಾಪದ(verb) ರೂಪ - *ಮಿಂಚಿಸು*

Wednesday, July 19, 2006

ನುಡಿಮನ ಶಿವಗುಣ ಸಂಕೀರ್ತನಾ!

'ಓಂಕಾರ ನಾದ ಸ್ವರೂಪಾ ಅ ಅ ಆ
ಬಾಲೇಂದು ಭೂಷಣ ಕಲಾಪ
ನಿಗಮ ಭುವನ ದೀಪ
ನಟರಾಜಾ.. ನಮಾಮೀ
ನಟರಾಜಾ ನಮಾಮೀ ಇ ಇ ಇ ಇ ಈ ಈ!

ನುಡಿಮನ ಶಿವಗುಣ ಸಂಕೀರ್ತನಾ!
ನಿಜಪದ ಪಾವನ ನೋಡಿ ಪಾಡುವೆನಾ
ನುಡೀಮನ ಶಿವಗುಣ ಸಂಕೀರ್ತನಾ!'


ಚಿತ್ರ: ಸ್ವರ್ಣ ಗೌರಿ
ಗಾಯನ: ಪಿ.ಬಿ. ಸ್ರೀನಿವಾಸ್ ಮತ್ತೆ ಸುಶೀಲಾ.ಪಿ